ವಲಯವಂತ (ಅನೆಲಿಡ) ವಂಶದ ಒಂದು ವರ್ಗ. ಉದಾ: ಎರೆಹುಳು. ಇವುಗಳ ವಾಸ ಸಾಮಾನ್ಯವಾಗಿ ಮಣ್ಣಿನಲ್ಲಿ. ಕೆಲವು ಸಿಹಿನೀರುವಾಸಿಗಳೂ ಇವೆ. ಇವುಗಳಲ್ಲಿ ಚಲನೆಗೆ ಅನುಕೂಲವಾಗುವಂತೆ ಕೈಟಿನ್ ವಸ್ತುವಿನಿಂದಾದ ಸೀಟ ಎಂಬ ಬಿರುಗೂದಲುಗಳಿವೆ. 
ನೆಲವಾಸಿ ಆಲಿಗೋಕೀಟ: ಉದಾ: ಯುಡ್ರಿಲಸ್, ಲುಂಬ್ರಿಕಸ್, ಯುಜಿನಸ್ ಮುಂತಾದವು.
ಜಲವಾಸಿ ಆಲಿಗೋಕೀಟ: ಉದಾ: ಟ್ಯುಬಿಫೆಕ್ಸ್.	

ವರ್ಗ: ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ